ನಮಸ್ತೆ !! ಎಲ್ಲ ನಮ್ಮ ಕನ್ನಡದ ಬ್ಲಾಗ್ ಓದುಗರಿಗೆ!!
ನಿಮ್ಮೊಂದಿಗೆ ನನ್ನ ಚಿಕ್ಕದೊಂದು ಬರಹವನ್ನು ಹಂಚಿಕೊಳ್ಳುವ ಆಸೆ ಅದಕ್ಕೆ ಟೈಮ್ ಸಿಕ್ಕಾಗ ಕೂತ್ಕೊಂಡು ಇಲ್ಲಿ ಬರ್ದಿದ್ದೇನೆ , ದಯವಿಟ್ಟು ತಪ್ಪಿದ್ದರೆ ತಿದ್ದಿ ಓದಿ ....ಪ್ಲೀಸ್!!!
*******************
ಅವ್ರುದ್ದು ೧ ದೊಡ್ಡ ಮನೆ ,ಅದೂ ಮಲೆನಾಡ ಮನೆ. ಮಲೆನಾಡ ಮನೆ ಗಳನ್ನು ಆದಷ್ಟು ಹೆಚ್ಚು ಮರಗಳನ್ನ ಬಲಿ ಕೊಟ್ಟು ಮಾಡಿರ್ತಾರೆ….. ಹಾಗೆ ನಮ್ಮ ಹುಡುಗನ ಮನೆ ನೂ ಕೂಡ. ಅದೂ ಅವರ ಅಪ್ಪನಿಗೆ ಪಿತ್ರಾರ್ಜಿತ ವಾಗಿ ಬಂದದ್ದು. ಅದೊಂದು ಬಿಟ್ಟರೆ ಅರ್ಧ ಎಕರೆ ಅಡಿಕೆ ತೊಟ. ಅದ್ರಲ್ಲಿ ಬರೋ ಆದಾಯದಲ್ಲೆ ವರ್ಷ ಇಡೀ ಕಳಿಬೇಕು……….
ನಮ್ಮ ಹುಡ್ಗ ನ ಹೆಸ್ರು ನವೀನ್ ಅಂತ, ಅವ್ನು ಅವ್ರ ಅಪ್ಪ ಅಮ್ಮನಿಗೆ ಒಬ್ಬನೇ ಮಗ , ಜೊತೆಗೆ ಇವ್ನ ತಂಗಿ ಒಬ್ಬ್ಲು ಇದ್ಲು ಅವ್ಲಿಗೆ ಮದ್ವೆ ಅಗಿದೆ. ಅವನ ತಂಗಿ ಗೋ ಬೇಡ , ಬೇಡ ಅಂದ್ರೂ ಪಿ ಯೂ ಸಿ ಮುಗಿತಿದ್ದಂಗೆ ನೇ ಮದ್ವೆ ಮಾಡಿ ಬಿಟ್ರು. ಅದ್ರೆ ಮದ್ವೆ ಮಾಡ್ಬೆಕಾದ್ರೆ ಇದ್ದಿದ್ದ ಅರ್ಧ ಎಕರೆ ಗದ್ದೆ ಮಾರಿ ಮಾಡ್ಬೇಕಾಯಿತು ಅಂತ ನವೀನ ನೆನೆಸಿಕೊಂಡಾಗಲೆಲ್ಲಾ ಬೆಜಾರ್ ಮಾಡ್ಕೊಂಡು ಮುಖ ಸಣ್ಣಗೆ ಅಗುತ್ತೆ.
ಈಗ ನಮ್ಮ ನವೀನ ಬೆಂಗಳೂರಿಗೆ ಬಂದು ೩ – ೪ ವರ್ಷ ಆಗಿದೆ, ಅವ್ನು ನಾಳೆ ಊರಿಗೆ ಹೊರ್ಟಿದಾನೆ, ಅದೇ ಯುಗಾದಿ ಹಬ್ಬಕ್ಕೆ. ತಂಗಿ ಬಾವ ಬಂದಿರ್ತಾರೆ, ಅವ್ರಿಗೂ ಇದು ಮೊದಲ ಹಬ್ಬ , ಇದೇ ತಿಂಗಳು ಅಪ್ಪ ಅಮ್ಮ ನ ಹುಟ್ಟಿದ ದಿನ ಗಳೂ ಕೂಡ……ಹೀಗೆಲ್ಲ ಯೊಚನೆ ಮಾಡ್ತಾ ಕೆ.ಎಸ್ ಅರ್.ಟಿ .ಸಿ ರಿಸರ್ವೇಷನ್ ಕೌಂಟರ್ ಹತ್ರ ಹೋಗಿ ನಿಂತೊಕೊಂಡ. ಹೋಗಕ್ಕೆ ಬರೊಕೆ ಎರಡಕ್ಕೂ ಟಿಕೆಟ್ ಮಾಡ್ಸಿ ….ರೂಮಿಗೆ ಬಂದು ಊಟ ಮಾಡಿ ಮಲ್ಗೊ ಹೊತ್ತಿಗೆ ರಾತ್ರಿ ಹತ್ತು ಘಂಟೆ.
ಮರುದಿನ ಅರ್ಧ ಘಂಟೆ ಮುಂಚೆನೇ ಆಫಿಸಿನಿಂದ ಹೊರಟು ಯೆಲ್ಲಾ ಒಗಿದೇ ಇರೊ ಬಟ್ಟೆ ಗಳನ್ನೆಲ್ಲಾ ಪ್ಯಾಕ್ ಮಾಡಿಕೊಂಡು ಕೆ.ಎಸ್.ಅರ್.ಟಿ.ಸಿ ಯ ಬಸ್ಸ್ ನಿಲ್ದಾಣ ದಲ್ಲಿ ಬಂದು ಬೆಂಗಳೂರು – ಶ್ರಿಂಗೇರಿ ಬಸ್ ಹತ್ತಿದ…..
ಸರಿಯಾಗಿ 9:30 ಗೆ ಬಸ್ಸು ಹೊರಟಿತು….. ನಮ್ಮ ನವೀನಂಗೆ ನಿದ್ದೆ ಬರಲ್ಲ ಬಸ್ಸು ಹತ್ತಿದ್ರೆ. ಅದಕ್ಕೆ ಹಾಗೆ ಕಣ್ಮುಚ್ಚಿ ಕೂತ್ಕೊಂಡ. ೪ನೇ ಕ್ಲಾಸು ಆದ್ಮೇಲೆ ಮುಂದೆ ಒದಬೇಕಂದ್ರೆ ೬ ರಿಂದ ೭ ಕಿಲೋಮೀಟರು ನೆಡಿಬೇಕು ದಿನಾ…!!! ಹಾಗೆ ಎಷ್ಟೋಂದು ದಿನ ಚಪ್ಪಲಿ ನೇ ಇಲ್ಲದೇ ನೆಡೆದಿದ್ದು ನೆನಪಾಯಿತು, ಸುರಿಯುವ ಮಳೆಗಾಲದಲ್ಲೂ ಕಡಿಮೆ ರೇಟಿನ ಹವಾಯಿ ಚಪ್ಪಲಿ ಹಾಕ್ಕೊಂಡು ಹೊಗ್ತಿತ್ತಿದ್ದಿದ್ದು, ಜಾರಿ ಬಿದ್ದು ಪುಸ್ತಕ ಒದ್ದೆ ಆಗ್ತಿತ್ತಿದ್ದು, ಜೋರು ಮಳೆಗೆ ಕೊಡೆ ಹಾರಿ ಹೋಯಿತು ಅಂತ ಮನೆಲಿ ಹೇಳಿದ್ದಕ್ಕೆ ಪೆಟ್ಟು ತಿಂದಿದ್ದು, ಯೆಲ್ಲಾ ನೆನಪಿನ ಅಂಗಳದಲ್ಲಿ ಬಂದು ಮರೆಯಾದವು.
ಮನೆಲಿ ಟಿ ವಿ ಇಲ್ಲ , ಆದ್ರೆ ಇವ್ನಿಗೆ ಟಿ ವಿ ನೋಡೊದು ಅಂದ್ರೆ ಪಂಚಪ್ರಾಣ, ಹಾಗಂತ ಊರ ಗೌಡ್ರ ಮನೇಲಿ ಒಂದಿನ ರಾತ್ರಿ ಹತ್ತು ಗಂಟೆ ವರೆಗೂ ಟಿ.ವಿ ನೋಡಿಕೊಂಡು ಮನೆಗೆ ಬಂದ್ರೆ …. ಅಮ್ಮ ಬಾಗಿಲ್ಲಲ್ಲೇ ಲಕ್ಕಿಯ (ಲಕ್ಕಿ – ಅದೊಂದು ಸಸ್ಯ) ಬರಲು ಹಿಡ್ಕೊಂಡು ನಿಂತಿದ್ಲು. ಬಂದು ಮೆಟ್ಟಿಲು ಹತ್ತಿದ್ದೇ ತಡ ಆ ಕೋಲುಗಳು ಬೆನ್ನ ಮೇಲೆ ಬಾಸುಂಡೆ ಬರಿಸಿದ್ದವು…. ಅಮೇಲಿಂದ ಇವತ್ತಿನವರೆಗೂ ಬೆರೆಯವರ ಮನೆಯಲ್ಲಿ ಟಿ. ವಿ ನೊಡ್ತಿಲ್ಲ ನವೀನ.
ದಿನಾ ಸ್ಕೂಲಿಂದ ಬರೊದು ೬ ಘಂಟೆ ಆಗ್ತಿತ್ತು, ಶನಿವಾರ ಬಾನುವಾರ ಹುಡುಗರ ಜೊತೆ ಕ್ರಿಕೆಟ್ ಆಡಿಕೊಂಡು ಮಾನೆಗೆ ಬಂದಾಗಲೂ ಯಾರ ಮೇಲಿನ ಸಿಟ್ಟೊ , ಗೊತ್ತಿಲ್ಲ ….ಆದ್ರೆ ಬರೆ ಬೀಳ್ತಿತ್ತಿದ್ದಿದ್ದು ನವೀನ ನ ಪಾಪದ ಬೆನ್ನುಗಳಿಗೆ ……..ನೆನಪಾಗಿ ಮತ್ತೆ ನೋವಾಯಿತು.
ದಿನಾ ಅಪ್ಪ ಅಮ್ಮ ಅಕ್ಕ-ಪಕ್ಕದ ಮನೆಗಳಿಗೆ ಕೇಳುವಂತೆ ಗಲಾಟೆ ಮಾಡ್ಕೊತಾ ಇದ್ರು, ಅದನ್ನ ನೋಡಿದವರೆಲ್ಲಾ “ಏನೊ ನವೀನ ಇವತ್ತು ನಿಮ್ಮಮನೆಲಿ ಯಾವ ಹೊಸ ಸಿನೇಮಾ ಶೋ ಶುರುಆಗಿದೆ?” ಅಂತ ಕೇಳ್ದಾಗ ಇವನು ಏಸ್ಟೊ ಸಲ ತನಗರಿವಿಲ್ಲದೇ ಕಣ್ಣೀರು ಹಾಕಿದ್ದ. ಗಲಾಟೆನಾದ್ರು ಏನಕ್ಕ? ಅಪ್ಪ ನ ಇಸ್ಪೀಟು ಆಟದ ಹುಚ್ಚನ್ನು ಬಿಡಿಸುವ ವ್ಯರ್ಥ ಪ್ರಯತ್ನ ಅಮ್ಮನದು. ಅಷ್ಟೇ.
ಒಂದು ಸಲ ಶಿವಮೊಗ್ಗ ಕ್ಕೆ ಅಡಿಕೆ ಮಂಡಿಗೆ ಹೊಗಿ ಅಪ್ಪ ರಾತ್ರಿ ತಡವಾಗಿ ಬಂದ್ರು, ಆವಾಗ್ಲೆ ಗೊತ್ತಾಗಿದ್ದು ಅಪ್ಪ ತಿಂಗಳಿಗೊಮ್ಮೆ ಕುಡಿತಾನೆ ಅಂತ ಆವಾಗಲಂತೂ ಆದ ನೋವು ……ಈಗಲೂ ಬೇಜಾರಗುತ್ತೆ ನೆನಸಿಕೊಂಡ್ರೆ.
ಮತ್ತೆ ೮ ನೇ ಕ್ಲಾಸಿಗೋ ೧೦ ಕಿಲೋಮೀಟರ್ ನೆಡಿಬೇಕು. ಅತ್ತು ಕರೆದು ೧ ಸೈಕಲ್ ತಗೊಂಡಿದ್ದು, ಮಳೆಗಾಲದಲ್ಲಿ ಸೈಕಲ್ಲಿಂದ ಬಿದ್ದು ಕೈ ಮುರಿದಿದ್ದು, ದಿನಾ ೨ ಬೆಟ್ಟ ದಂತಹಾ ಜಾಗಗಳನ್ನ ಸೈಕಲ್ ದೂಡಿಕೊಂಡೆ ಸವೆಸಿದ್ದು, ಮತ್ತೆ ಕಾಲೇಜಿಗೆ ಸೇರೊಕೆ ಮನೆಲಿ ದುಡ್ಡು ಕೊಡದಿದ್ದಾಗ ಆ ಸೈಕಲ್ಲನ್ನೇ ಮಾರಿ ಸರ್ಕಾರಿ ಕಾಲೇಜು ಸೇರಿದ್ದು ……..ಇದೆಲ್ಲಾ ಮತ್ತೆ ಮತ್ತೆ ನೆನಪಾಗುವ ಇತಿಹಾಸದ ಪುಟಗಳು ನವೀನ ಪಾಲಿಗೆ.
ಹೀಗೆ ಅದೆಲ್ಲಾ ಆಗಿ ಮುಖದ ಮೇಲೆ ಮೀಸೆ ಬಂದಮೇಲೆ , ಏನೇನೋ ವ್ಯವಹಾರಗಳಿಗೆ ಕೈ ಹಾಕಿ ಎಲ್ಲಾದ್ರಲ್ಲೂ ಸೋತು ….ಬೆಂಗಳೂರಿಗೆ ಬಂದು ೩ – ೪ ವರ್ಷ ಆಯ್ತು ಈಗಲೂ ಒಂದು ಹೇಳ್ಕೊಳ್ಳಕ್ಕೆ ೧ ಒಳ್ಳೆ ಕೆಲ್ಸ ಇಲ್ಲ ಆದ್ರೆ ಪ್ರತಿಸಲ ಹೋದಾಗ್ಲೂ ಅಪ್ಪ, ಮಗ ಈ ಬಾರಿ ಏಷ್ಟು ಹಣ ತಂದಿದಾನೆ ಎಷ್ಟು ಇಸ್ಪೀಟು ಕಚೇರಿಗಳಿಗೆ ಆ ದುಡ್ಡು ಸಾಲುತ್ತೆ ಅಂತ ಲೆಕ್ಕಚಾರ ಹಾಕ್ತಾನೆ ….. ಏನ್ಮಾಡೊದಪ್ಪಾ………ಅಂತ ಯೊಚನೆ , ಕನಸು , ಕಂಡು ಮುಗಿಸುವಷ್ಟರಲ್ಲಿ ನವೀನ ಕೂತಿದ್ದ ಬಸ್ಸು ಹಾಸನ ತಲುಪಿತ್ತು ಅಷ್ಟೆ!!!.
***********************************
ನಿಮ್ಮವ,
ನಾಗರಾಜ್ ಎಮ್ ಎಮ್.
Mail: mmnagara@gmail.com